Those were the days..

⭕*ಮರೆಯಾದ* *ನೆನೆಪುಗಳು* 
  🔵🟢🟣            
 
 *ಒಂದು* ಸಲ  ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು  ಬಾಯಿಪಾಠ ಆಗ್ತಿತ್ತು 
----------------------------
 *ಕುಳಿತಿರೋ* ಕಡೆ ಬಸ್ಸುಗಳಲ್ಲಿ ದಿನ ಪತ್ರಿಕೆ ತಂದು ಮಾರಾಟ ಮಾಡುತಿದ್ರು  
----------------------------
 *ಎಲ್ಲರ* ಮನೆಯಲ್ಲೂ ಸೈಕಲ್ ಇತ್ತು 
-----------------------------
 *ಎಲ್ಲ* ಬಸ್ಸುಗಳಲ್ಲೂ  ಸೀಟ್ ಸಿಗ್ತಾ ಇತ್ತು
-----------------------------
 *ಮದುವೆ*  ಮನೆಗಳಲ್ಲಿ ಕೆಳಗೆ ಕೂರಿಸಿ ಊಟ ಬಡುಸ್ತಿದ್ರು 
----------------------------
ಕಪಿಲ್ ದೇವ್  ಕ್ರಿಕೆಟ್  ೫ ದಿನಗಳ ಟೆಸ್ಟ್ ಫೆಂಟಾಸ್ಟಿಕ್
-------------------------------
ಪ್ರಜಾಮತ, ಸುಧಾಗಳಲ್ಲಿ ಒಳ್ಳೆಯ ಧಾರವಾಹಿ, ಕಥೆಗಳು ಬರುತ್ತಿತ್ತು.
-------------------------------
ಮನೆ ಮನೆಗಳಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಸಂಗೀತ ಕೇಳ್ತಿದ್ರು  
-------------------------------
ಮನೆ ಮುಂದುಗಡೆ ಹೆಂಗಸರು ಸಾರಿಸಿ ರಂಗೋಲಿ ಹಾಕ್ತಿದ್ರು 
-------------------------------
 *ಸಿನೆಮಾಗೆ* ಹೋಗೋಕ್ಕೆ ಎರಡು ಮೂರು ದಿನಗಳ ಪ್ಲಾನ್ 
ಹಾಕ್ಬೇಕಿತ್ತು 
-------------------------------
 *ಯುಗಾದಿ,* ದೀಪಾವಳಿ ಹಬ್ಬ ಬರೋದಿಕ್ಕೆ ಒಂದು ತಿಂಗಳು ಮುಂಚಿತವಾಗಿ ಕಾಯುತಿದ್ವಿ 
------------------------------
ಆ ಕಾಲಕ್ಕೆ ಟಾನ್ಸಿಲ್ಸ್ ದೊಡ್ಡ  ಆಪರೇಷನ್ 
-----------------------------
ರೇಡಿಯೋ ನಲ್ಲಿ ನಾಟಕಗಳು ಬಲು ಚೆನ್ನಾಗಿರುತ್ತಿತ್ತು 
-------------------------------
 *ಸುಮಾರು*  ಎಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದ್ವಿ 
----------------------------
 *ರಸ್ತೆಯಲ್ಲಿ* ಯಾವಾಗಲೋ  ಒಂದು ಕಾರು ಹೋಗ್ತಿತ್ತು 
-------------------------------
ಕನ್ನಡ ಮೇಷ್ಟರಿಗೆ ಸರಿ ಸಾಟಿ  ಯಾರು ಇರಲಿಲ್ಲ 
-------------------------------
ಸುಲಭವಾಗಿ ವಧು ಸಿಕ್ಕುತಿದ್ಲು 
-------------------------------
ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸನ್ನು ಗೆಲ್ಲುವುದು  ಸಾಧ್ಯವಿರಲಿಲ್ಲ
-------------------------------
 *ಮಾರ್ಕೆಟ್ ಗೆ* ಹೋಗಲು ಹತ್ತು ರೂಪಾಯಿ ಸಾಕಾಗುತ್ತಿತ್ತು 
-------------------------------
ಅಪ್ಪ ಅಮ್ಮನ ಪಕ್ಕದಲ್ಲಿ ಆಗಾಗ ಮಲಗುತಿದ್ವಿ 
-------------------------------
 *ಉರಿ* ಬಿಸಿಲಿನಲ್ಲೂ ಚಪ್ಪಲಿ ಇಲ್ಲದೆ ನಡೆಯುತ್ತಿದ್ದೆವು 
-------------------------------
ಹೇರ್ ಕಟ್ ಮಾಡಲು ಎರಡು ರೂಪಾಯಿ ಶೇವಿಂಗ್ ಗೆ ಐವತ್ತು ಪೈಸೆ
-------------------------------
ಮದುವೆ ವಯಸ್ಸಿನ ಹೆಣ್ಣು ಮಕ್ಕಳು ಲಂಗ ದಾವಣಿ ಹಾಕುತಿದ್ರು 
-------------------------------
 *ರಸ್ತೆಯಲ್ಲಿ* ಲಗೋರಿ ಆಟ ಸೈಕಲ್ ಟೈಯರ್ ಓಡಿಸುತಿದ್ವಿ 
-----------------------------
ಎಸ್ ಎಲ್ ಬೈರಪ್ಪ , ತ್ರಿವೇಣಿ ಕಾದಂಬರಿಗಳು ಮನೆ ಮಾತಾಗಿತ್ತು 
------------------------------
ನವಿಲು ಗರಿ ಮರಿ ಹಾಕುವುದು ಎಂದು ಪುಸ್ತಕದ ನಡುವೆ ಇಟ್ಟು ದಿನ ಕಾಯುತ್ತಿದ್ದೆವು
-------------------------------
ಐದು ರೂಪಾಯಿ ಕಳೆದುಕೊಂಡೆ ಅಂತ ಅಪ್ಪನ ಹತ್ತಿರ ಒದೆ ತಿಂದೆ.
-------------------------------
ನಾಲ್ಕನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಪಾಠ ಎಂಟನೇ ಕ್ಲಾಸ್ ವರೆಗೂ ಅರ್ಧ ನಿಕ್ಕರು 
-------------------------------
 *ಉಸಿರಾಡಲು* ಶುದ್ಧ ಗಾಳಿ ಇತ್ತು 
ಕುಡಿಯುವ ನೀರನ್ನು ಯಾರು ಖರೀದಿಸಲಿಲ್ಲ 
-------------------------------
 *ಲವ್* ಮಾಡೋದು ಥ್ರಿಲ್ ಆಗಿತ್ತು 
-------------------------------
ಸಿನಿಮಾ ಹಾಡಿನ ಪುಸ್ತಕ ಪುಟ ಪಾತ್ ನಲ್ಲಿ ಮಾರುತಿದ್ರು 
-------------------------------
ಒಟ್ಟಿನಲ್ಲಿ  ಬಹಳ ಮರ್ಯಾದೆ ಇದ್ದಂತಹ ಕಾಲ 
---------------------------
 *ಕಳೆದು ಹೋದದ್ದು* ದಿನಗಳು ಮಾತ್ರವಲ್ಲ... ನಮ್ಮ ಸುಖಗಳು ಕೂಡ
------------------------------
 *ಅದ್ಬುತವಾದ ನೆನಪುಗಳು*⭕

Comments

Popular Posts