Posts

Showing posts from October, 2021

Liberals,Presstitutes,

*ಪುರುಷ ಸೂಕ್ತ**ಪುರುಷ ಸೂಕ್ತ* ದ ಬಗ್ಗೆ ಕೇಳಿದ್ದೀರಾ? ಆಲಿಸಿದ್ದೀರಾ...? ನಿಮ್ಮ ಉತ್ತರ "ಹೌದು" ಎಂದಾದರೆ ನಿಮಗೆ ನನ್ನ ಪ್ರಥಮ ನಮಸ್ಕಾರ. ಮುಂದಿನ ಪ್ರಶ್ನೆ, ಪುರುಷ ಸೂಕ್ತದ ಬಗ್ಗೆ ನಿಮಗೆ ತಿಳಿದಿದೆಯೇ?ಇಲ್ಲ ಅಂದರೂ ತಪ್ಪಾಗಲಾರದು. "ಹೌದು" ಎಂದರೆ ಮಾತ್ರ "ನಿಮಗೆ ತಿಳಿದಿದ್ದೇನು?" ಎಂಬ ಕುತೂಹಲ ನನಗೂ ಇದೆ. ಪುರುಷ ಸೂಕ್ತ ಆಲಿಸಲು, ಎಷ್ಟು ಹಿತ ಅಲ್ಲವೇ? ಅದರಲ್ಲಿನ ಶ್ಲೋಕಗಳ ಉಚ್ಚಾರಣೆಯೇ ಹಾಗೆ. ಯಾವುದೋ ಲೋಕದಿಂದ ಬಂದಂತಹ ದನಿ ಇದ್ದಂತೆ ಅನ್ನಿಸುತ್ತದೆ. ಸರಿ..ಈಗ ಕಿವಿ ನಿಮಿರಿಸಿ, ಕಣ್ಣು ಅಗಲಿಸಿ ಮುಂದೆ ಹೇಳುವುದನ್ನು ಗಮನಿಸಿ. ಸನಾತನ ಲೋಕದ ನಮ್ಮ *ಪುರುಷ ಸೂಕ್ತ* ವಿಜ್ಞಾನದೊಂದಿಗೆ ನೇರ ಸಂಪರ್ಕ ಹೊಂದಿದೆ... ಬೆರಗಾಗದಿರಿ.ಆವತ್ತು ಅಂದರೆ ಸುಮಾರು ಇಪ್ಪತ್ತು ವರುಷದ ಹಿಂದೆ, ಒಬ್ಬ ಸಾಮಾನ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಸಮುದ್ರದ ತೀರದಲ್ಲಿ ಮಲಗಿಕೊಂಡು ಆಕಾಶವನ್ನು ನೋಡುತ್ತಾ ನಕ್ಷತ್ರಗಳನ್ನು ಎಣಿಸುತ್ತಿದ್ದರು. ಅವರಿಗೆ ಆಗ ಇದ್ದ ಯೋಚನೆ ಒಂದೇ. *ವೇದ, ಉಪನಿಷತ್ತಿನಲ್ಲಿ ಹೇಳುವುದೆಲ್ಲ ನಿಜವೇ.?*ನೋಡಿ, ಈ ಜಗತ್ತಿನಲ್ಲಿ ಮಕ್ಕಳು ಕೆಲವು ಬಾರಿ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟರೆ ಏನಾಗುತ್ತದೆ, ಕೊಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ?. ಹೋಗಲಿ ಬಿಡಿ. ಮುಂದಿನದನ್ನು ನೋಡೋಣ.ಅದೇ ರೀತಿ ಆ ಸಮಯಕ್ಕೆ ಆ ಇಂಜಿನಿಯರ್ಗೆ ಕಾಡುತ್ತಿದ್ದ ವಿಚಾರ..."ನಾವು ತಿಳಿದಿರುವಂತಹ ವೇದ ಮತ್ತಿತರ ಸಂಪ್ರದಾಯಗಳು ನಿಜವೇ ಅಥವಾ ಸುಳ್ಳೇ?ಇದು ಅತಿ ದೊಡ್ಡ ಜಿಜ್ಞಾಸೆ. ಯಾರೂ ಉತ್ತರ ಕೊಡಲು ಸಿದ್ದರಿಲ್ಲ. ಹಾರಿಕೆಯ ಉತ್ತರ ಯಾರೂ ಕೂಡ ಕೊಟ್ಟಾರು...!ಮೈಯೆಲ್ಲ ಝುಮ್ ಅನ್ನಿಸುತ್ತೆ. ಮುಂದೆ ಅವರ ಮನಸ್ಸನ್ನು ಕೊರೆಯುತ್ತಿದ್ದಿದ್ದು ಒಂದೇ. ಅದು ಏನೆಂದರೆ ನಾವು ಪುರುಷಸೂಕ್ತ ಪಠಿಸುವಾಗ ಬರುವ ಎರಡು ಶ್ಲೋಕಗಳು ಮತ್ತು ಅವುಗಳ ಮರ್ಮವೇನು?. ಅವರೆಡರಲ್ಲಿ ಒಂದು.."ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||"ಅದರ ಸರಳ ಅರ್ಥ ಯಾವುದೇ ನಿಘಂಟು ತಗೊಂಡು ನೋಡಿದರೆ, ನಾರಾಯಣನ ಮುಖದಿಂದ ಬ್ರಾಹ್ಮಣ ಬಂದ ಅಂತ ಪ್ರಾರಂಭವಾಗುತ್ತದೆ.ಇವರಿಗೆ ಆಶ್ಚರ್ಯ ಆಗೋಯ್ತು.ನಾರಾಯಣನ ಮುಖದಿಂದ ಬ್ರಾಹ್ಮಣನೇ?. ನಮಗೆ ಗೊತ್ತಿರುವ ಪ್ರಕಾರ ಮುಖದಿಂದ ಮನುಷ್ಯಬರಲು ಸಾಧ್ಯವೇ?. *ಸಾಧ್ಯವೇ ಇಲ್ಲ*.ಇದರಲ್ಲಿ ಏನೋ ಮರ್ಮ ಆಡಗಿರ ಬೇಕು ಎಂದು ಅವರ ಒಳ ಮನಸ್ಸು ಹೇಳುತ್ತಿತ್ತು. ಹಾಗಾಗಿ ಅವರು ಈ ಅನರ್ಥವನ್ನು ಒಪ್ಪಿ ಕೊಳ್ಳಲಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನ ಅವರದಲ್ಲ. ಬೇಕಾದಷ್ಟು ಜನ ಸಂಸ್ಕೃತ ಪಂಡಿತರನ್ನು ಭೇಟಿಯಾದರು. ಆದರೆ ಸಮಾಧಾನಕರ ಉತ್ತರ ಸಿಗಲಿಲ್ಲ. ಆಗ ಇನ್ನೊಂದು ಶ್ಲೋಕದ ಬಗ್ಗೆ ಕೂಡಾ ಯೋಚನೆ ಶುರು ಮಾಡಿದರು. ಏನದು? ಏನದರ ಅರ್ಥ?. "ದೇವತೆಗಳು ನಾರಾಯಣನ ಪ್ರೀತಿಗೋಸ್ಕರ ಒಂದು ಹೋಮ ಮಾಡಿದರು. ಆಗ ಆ ನಾರಾಯಣನನ್ನು ಒಂದು ಪಶುವಂತೆ ಒಂದು ಕಂಬಕ್ಕೆ ಕಟ್ಟಿ ತುಂಡು ತುಂಡು ಮಾಡಿ ಯಜ್ಞಕ್ಕೆ ಸಮರ್ಪಿಸುವುದು" ಅಂತ. ಇವರ ಯೋಚನೆಗೆ ಅನ್ನಿಸಿದ್ದು.. "ಹಾಗೆ ಮಾಡಿದರೆ ಅದು ಪ್ರೀತಿ ಆಗಲು ಸಾಧ್ಯವೇ ಇಲ್ಲ. ಇದರಲ್ಲಿ ಕೂಡಾ ಏನೋ ಮರ್ಮವಿದೆ" ಎಂದು ಭಾವಿಸಿದರು. ಸತತವಾಗಿ ಅವರು ಇದರ ಗೂಢಾರ್ಥದ ಬಗ್ಗೆಯೇ ಯೋಚಿಸುತ್ತಾ, ತಲೆ ಕೆಡಿಸಿಕೊಂಡು ಹಿಮಾಲಯಕ್ಕೂ ಹೋದರು. ಅಲ್ಲಿ ಹಲವಾರು ಋಷಿ ಮುನಿಗಳು ಸಿಕ್ಕಿದರು. ಆದರೆ ಅಲ್ಲಿ ಕೂಡ ಅವರಿಗೆ ಸರಿಯಾದ ಉತ್ತರ ಯಾರಿಂದಲೂಲಭಿಸಲಿಲ್ಲ. ಆದರೂ ಅವರು ಧೃತಿ ಗೆಡಲಿಲ್ಲ. ಮುಂದೆ ಅಲ್ಲಿಂದ ಅವರು ಉತ್ತರ ಅರಸುತ್ತಾ ಕಾಶಿಗೆ ಬಂದರು. ಅಲ್ಲಿ ಒಬ್ಬ ಗುರುವನ್ನು ಭೇಟಿಯಾದರು. ಗುರುಗಳು ಇವರನ್ನು ಉದ್ದೇಶಿಸಿ ಹೇಳಿದರು "ಮಗೂ.. ನಿನ್ನ ಪ್ರಶ್ನೆ ಸರಿಯಾಗಿದೆ". ಆಮೇಲೆ ಮುಂದುವರೆದು ಹೇಳಿದರು "ನಿನಗೆ ನನ್ನ ಆಶೀರ್ವಾದ ಇದೆ. ನೀನು ನಿನ್ನ ಜಿಜ್ಞಾಸೆಯ ಮೇಲೆ ಹೆಚ್ಚಿನ ಕೆಲಸ ಮಾಡು" ಎಂದು ಅವರ ತಲೆಯ ಮೇಲೆ ಕೈ ಇಟ್ಟರು. ಅಷ್ಟೇ...ಪ್ರಪಂಚಕ್ಕೆ ಹೊಸ ಆವಿಷ್ಕಾರದ ಬಗ್ಗೆ ಯೋಚನೆಗಳು ಪುಂಖಾನು ಪುಂಖವಾಗಿ ಅನಾವರಣ ಗೊಂಡವು. ಅಂದ ಹಾಗೆ ಈ ಇಂಜಿನಿಯರ್ ಯಾರು ತಿಳಿಯಿತೇ.. *ಪ್ರೊ. ಸತೀಶ್ಚಂದ್ರ* ಅಂತ ಅವರ ಹೆಸರು.ಪುರುಷಸೂಕ್ತದಲ್ಲಿ ಒಟ್ಟು ಇಪ್ಪತ್ತನಾಲ್ಕು ಶ್ಲೋಕಗಳು ಕಾಣಿಸುತ್ತದೆ. ಮೊದಲನೆಯ 16 ಲೋಕಗಳಿಗೆ ಪೂರ್ವ ನಾರಾಯಣ ಅಂತಲೂ ಮುಂದಿನ ಎಂಟು ಶ್ಲೋಕಗಳು ಉತ್ತರ ನಾರಾಯಣ ಎಂದು ಗುರುತಿಸಲ್ಪಡುತ್ತವೆ. ಪೂರ್ವ ನಾರಾಯಣದ 16 ಶ್ಲೋಕಗಳಿಗೆ ವಿವರಣೆ ಕೊಟ್ಟು ಪ್ರೊ.ಸತೀಶ್ಚಂದ್ರ ಅವರುಭಾಷಾಂತರಿಸಿ ಇಟ್ಟಿದ್ದಾರೆ. ಇದು ಏನೆಂದರೆ *Coded word for Generation of Electricity from Purusha Sukta*.ಇದು encrypted technology. ಹತ್ತು ಸಾವಿರ ವರುಷಗಳ ಹಿಂದೆ ಮಹಾಮುನಿಗಳು code ಮಾಡಿ encrypt ಮಾಡಿರುವಂತಹ ಮಹಾ ಶ್ಲೋಕಗಳು. ಆ technology ಯನ್ನು decode ಮಾಡ ಬೇಕಿದ್ದರೆ ಪಂಚೇಂದ್ರಿಯಗಳನ್ನು ಗಟ್ಟಿಯಾಗಿ ಹಿಡಿದು ಕೊಳ್ಳ ಬೇಕಾಗುತ್ತದೆ. ಅದಕ್ಕೆ ಪೂರ್ವ ತಯಾರಿಯಾಗಿ "ಧ್ಯಾನ" ಮಾಡಬೇಕು. "ಛಲ ಬಿಡದ ತ್ರಿವಿಕ್ರಮರಾದ ಪ್ರೊ. ಸತೀಶ್ಚಂದ್ರ" ರಿಗೆ ಆ ಕಾರ್ಯ ಸಿದ್ಧಿ ಆಯಿತು. ಆ ಸಿಧ್ಧಿಯ ಫಲವೇ ಅವರು ಕಂಡು ಹಿಡಿದ 2 ಯಂತ್ರಗಳು. ಕಂಡುಹಿಡಿದ ಆ ಎರಡು ಯಂತ್ರಗಳಿಗೆ ಮೂಲಾಧಾರ *ಪುರುಷಸೂಕ್ತ*. ಅದು ವಿದ್ಯುತ್ ಎಂದರೆ ಕೇಳರಿಯದ ಕಾಲದಲ್ಲಿ ಬರೆದಿಟ್ಟ ಶ್ಲೋಕ ರೂಪದ ಟೆಕ್ನಾಲಜಿ.ಯಾವ ಇಂಧನವೂ ಇಲ್ಲದೆ ವಿದ್ಯುತ್ ಶಕ್ತಿ ತಯಾರಿಸಲು ಸಾಧ್ಯವೇ ಅಂತ ಎಲ್ಲರೂ ಪ್ರಶ್ನಿಸಿದರು. ಇನ್ನು ಕೆಲವರು ಇವರನ್ನು ಹುಚ್ಚ ಅಂತಾನೂ ಹೇಳಿದರು. ಆಗ ಅವರ ತಾಯಿ ಹೇಳಿದರು.. "ನೀನು ಯೋಚನೆ ಮಾಡುವ ದಾರಿ ಸರಿಯಾದ ಪಥದಲ್ಲಿದೆ". ಅದಕ್ಕೇ, ನಾವು ಯಾವಾಗಲೂ ಹೇಳುತ್ತೇವೆ "ತಾಯಿ ಸರಿಯಾದ ದಾರಿಯೇ ತೋರಿಸುತ್ತಾಳೆ" ಎಂದು. ಮುಂದೆ ಅವರು ಒಂದು ಯಂತ್ರವನ್ನು ಕಂಡು ಹಿಡಿದರು. ಆಶ್ಚರ್ಯ ಕಣ್ರೀ...ಯಂತ್ರದ ಪ್ರತಿಯೊಂದು nut, bolt ಅಥವಾ ಯಾವುದೇ part, ಪುರುಷಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ, ಅವರು ಆರ್ಥೈಸಿ ಕೊಂಡಂತೆಯೇ ಮಾಡಿದರು. ಇನ್ನೂ ಆಶ್ಚರ್ಯ...! ಪುರುಷ ಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ ಯಂತ್ರದ ಒಂದೊಂದು ಭಾಗದ size, spacing ನ ವಿವರಗಳು ಕೂಡಾ ಡಿಕೋಡಿಂಗ್ ಮಾಡಿಯೇ ತಯಾರಿಸಿದ್ದು. ಈ ಯಂತ್ರವನ್ನು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಬಹುಮಾನವಾಗಿ ಕೊಟ್ಟರು. ಆದರೆ ಕೇಂದ್ರ ಸರಕಾರ ಇದನ್ನು ಒಪ್ಪಲಿಲ್ಲ. ವಿಶೇಷ ಏನೆಂದರೆ ಅದೇ ಸಮಯಕ್ಕೆ ನಾಸಾದಿಂದ ಬಂದ 21 ಎಂಜಿನಿಯರ್ಗಳು ಈ ಯಂತ್ರವನ್ನು ನೋಡಿ ಅವಾಕ್ಕಾದರು. 21 ಜನ ಎಂಜಿನಿಯರ್ಸ್ ಇವರ ಮುಂದೆ ಆಸಕ್ತಿಯಿಂದ ಬಂದು ಕುಳಿತುಕೊಂಡರು. ಒಂದೊಂದು ಚಿಕ್ಕ ಚಿಕ್ಕ ಮಾತನ್ನು ಕೂಡ ಆಲಿಸಿದರು...ಒಂದಲ್ಲ, ಎರಡಲ್ಲ ಬರೋಬ್ಬರಿ ಇಪ್ಪತ್ತು ದಿನ ಗಮನವಿಟ್ಟು ಆಲಿಸಿದರು. ಪ್ರಶ್ನೆ ಸುರಿದು ಉತ್ತರ ಪಡೆದು ಕೊಂಡರು. ಆಶ್ಚರ್ಯವಲ್ಲವೇ? ಈವತ್ತು ಇದು *ಜಾಯಿಂಟ್ ಟೆಕ್ನಾಲಜಿ ಹಾಗೆಯೇ ಪೇಟೆಂಟ್* ರೂಪದಲ್ಲಿ ಹೊರಗೆ ಬಂದಿದೆ. ಅದಕ್ಕೆ Power Generation from Purusha Sukta ಎಂಬ ಹೆಸರು ಕೂಡ ಬಂತು. ಇದರ ಬಗ್ಗೆ ಕುತೂಹಲಗೊಂಡು ಈ ಟೆಕ್ನಾಲಜಿ ಬಗ್ಗೆ ಪೂರ್ತಿ ತಿಳಿಯಲು ಒಬ್ಬ ಸೈಂಟಿಸ್ಟ್ ಮುಂದೆ ಬಂದರು. ಅವರು ಮೇಡಂ ಕ್ಯೂರಿ ಅವರ ಮೊಮ್ಮಗಳು ಸೋಫಿ ಹಾರ್ಬರ್ರ್. ಈ ಟೆಕ್ನಾಲಜಿ ಪರಿವೀಕ್ಷಣೆ ಮಾಡಿದಾಗ ಆಕೆಗೆ ತುಂಬಾ ಆಶ್ಚರ್ಯ ಕಾದಿತ್ತು. ಆಕೆ ಹುಟ್ಟಾ ಕ್ರಿಶ್ಚಿಯನ್. ಆದರೆ ನಮ್ಮ ಪುರುಷ ಸೂಕ್ತವನ್ನು ಅದ್ಭುತವಾಗಿ ಗಟ ಗಟ ಅಂತ ನೀರು ಕುಡಿದಂತೆ ಮನದಟ್ಟು ಮಾಡಿಕೊಂಡಿದ್ದರು. ಅವರು ಅದರ ಬಗ್ಗೆ 24 ಗಂಟೆ ಬೇಕಾದರೂ ಉಪನ್ಯಾಸ ಕೊಡುವಷ್ಟು ಜ್ಞಾನ ಅರ್ಜಿಸಿದ್ದರು. ಅದು ನಮ್ಮ ಧರ್ಮದ ವೈಶಿಷ್ಟತೆ. ಅದು ನಮ್ಮ ಧರ್ಮದ ಬಗ್ಗೆ ಇರತಕ್ಕಂತ ಅನನ್ಯ ಪ್ರೀತಿ.ಇದನ್ನು ಶ್ರೀ ನರೇಂದ್ರ ಮೋದಿಯವರಿಗೆ ಅದೊಮ್ಮೆ ವಿವರಿಸಿದಾಗ ಅವರು ಭಕ್ತಿಯಿಂದ ದೊಡ್ಡ ನಮಸ್ಕಾರ ಹಾಕಿದರು. ಅಲ್ಲದೆ ಕೂಡಲೇ ಗುಜರಾತಿನಲ್ಲಿ ಇಂತಹ ಒಂದು ಪವರ್ ಜನರೇಶನ್ ಪ್ಲಾಂಟ್ ಮಾಡಬೇಕು ಎಂದು ಸೂಚಿಸಿ, ನಿಮಗೆ ದುಡ್ಡು ಅಥವಾ ಇನ್ನೇನು ಬೇಕು ಅಂತ ಕೇಳಿದರು. ಆದರೆ ಆ ಮಹಾನ್ ಎಂಜಿನಿಯರ್ ಸತೀಶ್ಚಂದ್ರರವರು ನಮಗೆ ಬರೀ ಒಪ್ಪಿಗೆ ಕೊಟ್ಟರೆ ಸಾಕು ಎಂದರಷ್ಟೇ. ಮೋದಿಯವರು ತಕ್ಷಣ ಸಹಿ ಹಾಕಿ ಒಪ್ಪಿಗೆ ಪತ್ರ ಕೊಟ್ಟರು. ಈಗ ಗುಜರಾತಿನಲ್ಲಿ ಪುರುಷ ಸೂಕ್ತದ ಪ್ರಕಾರ decoded version ಆದ ಪವರ್ ಜನರೇಶನ್ ಘಟಕ ಪ್ರಾರಂಭವಾಗಿದೆ. ಸತೀಶ್ಚಂದ್ರರವರು ಹೇಳಿ ಕೊಳ್ಳುತ್ತಾರೆ, ನಮ್ಮ ಬಳಿ ನಿಜವಾಗಿಯೂ ದುಡ್ಡಿರಲಿಲ್ಲ. ನೋಡಿ...ಈ ಟೆಕ್ನಾಲಜಿ ಆವಿಷ್ಕಾರ ಮಾಡಿದ್ದು ಬ್ರಾಹ್ಮಣ, ಇದನ್ನು ಪೂರ್ತಿಯಾಗಿ ಅನುಭವಿಸಿ ಮೆಚ್ಚಿದ್ದು ಒಬ್ಬ ಕ್ರಿಶ್ಚಿಯನ್, ಆದರೆ ಇದಕ್ಕೆ ಬಂಡವಾಳ ಸುರಿಯುತ್ತಿರುವವ ಮಲೇಷ್ಯಾದ ರಾಜ. ಅದೂ ಎಷ್ಟು ಗೊತ್ತೇ..ಬರೋಬ್ಬರಿ ಒಂದು ಬಿಲಿಯನ್ ಡಾಲರ್, ಬಡ್ಡಿರಹಿತ ಹಣ. ಇದನ್ನು ನೋಡಿ ಅಮೆರಿಕದ ವಿಜ್ಞಾನಿಗಳಿಗೆ ಹುಚ್ಚು ಹಿಡಿದು ಬಿಡ್ತು. ಈ ಟೆಕ್ನಾಲಜಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಿಅವರು ಬಂದು ಹೇಳುತ್ತಾರೆ.. "ಇದನ್ನು ಪೂರ್ತಿಯಾಗಿ ನಾವು ಅನಲೈಸ್ ಮಾಡಿದ್ದೇವೆ. ಅದರಂತೆ ಇದರಲ್ಲಿ ಲೋವೆಸ್ಟ್ ವೋಲ್ಟೇಜ್ ಎಷ್ಟು, ಹಾಗೆಯೇ ಹೈಯೆಸ್ಟ್ ವೋಲ್ಟೇಜ್ ಎಷ್ಟು ಅಂತ ನಾವು ಸಂಶೋಧನೆ ಮಾಡಿದ್ದೇವೆ" ಎನ್ನುತ್ತಾರೆ. ಈಗ ಪ್ರೊಫೆಸರ್ ಸತೀಶ್ಚಂದ್ ಗೊಳ್ ಅಂತ ನಕ್ಕುಬಿಟ್ಟರು. ರೀ.. ಗಂಟೆಗಟ್ಟಲೆ ಸೂಪರ್ ಕಂಪ್ಯೂಟರ್ ಇಟ್ಟುಕೊಂಡು ಲೆಕ್ಕ ಮಾಡಬೇಕಾಗಿಲ್ಲ ಇದೆಲ್ಲ. ಎಲ್ಲವೂ ಇಲ್ಲಿ "ನಮ್ಮ ಪುರುಷಸೂಕ್ತದಲ್ಲಿ" ಸಿಧ್ಧವಾಗಿಯೇ ಇದೆ. ಮುಂದೆ.. ಎಷ್ಟನೇ ಶ್ಲೋಕದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ ಎಂದು ಕರಾರುವಕ್ಕಾಗಿ ಹೇಳುತ್ತಾರೆ. ಅದರಂತೆ ಸಪ್ತಾಸ್ಯಾ'ಸನ್-ಪರಿಧಯಃ' | ತ್ರಿಃ ಸಪ್ತ ಸಮಿಧಃ' ಕೃತಾಃ |ಅದರ ಅರ್ಥ ಏನು ಅಂದರೆ7x7x7 (seven cube) ಅಂದರೆ ಎಷ್ಟು 343 ಅಲ್ವೇ?. ಅದೇ ಲೋವೆಸ್ಟ್ ವೋಲ್ಟೇಜ್. ನೋಡಿ, ನಮ್ಮ ಹಿಂದಿನ ಕಾಲದವರು ಎಲ್ಲ ಬರೆದಿಟ್ಟಿದ್ದಾರೆ. ಅದೇ ರೀತಿ ಹೈಯೆಸ್ಟ್ ವೋಲ್ಟೇಜ್ 3x7 into the power of 21 ಬರ್ಕೊಳ್ಳಿ 1400 ಅಂದ್ರು. ಲೆಕ್ಕ ಹಾಕಿಕೊಳ್ಳಿ ಏನು calculation.? ಏನು precision?. ಮತ್ತೆ ಅಂದ್ರು ಈ ಶ್ಲೋಕದಲ್ಲಿ ವಿದ್ಯುತ್ ಶಕ್ತಿ ತಯಾರಿಕೆ ಸಮಯದಲ್ಲಿ ಇರಬೇಕಾದ step up ಮತ್ತು step down ಅಂತ ಏನು ಹೇಳ್ತಾರೆ ಅದು ಕೂಡ ಸೇರಿದೆ ಅಂತಾರೆ. ಎಲ್ಲರಿಗೂ ಹುಚ್ಚು ಹಿಡಿದು ಬಿಡ್ತು. ಪ್ರೊ.ಸತೀಶ್ಚಂದ್ರರವರು ಏನು ಹೇಳುತ್ತಿದ್ದಾರೆ ಅಂತ ಎಲ್ಲರೂ ಹುಬ್ಬು ಎಗರಿಸಿ ಕೇಳಿಸಿ ಕೊಳ್ಳುತ್ತಿದ್ದರು..ಈಗ, ಪುನಃ ಸ್ವಲ್ಪ ಹಿಂದೆ ಹೋಗೋಣ..ಆವಾಗಲೇ ಪುರುಷ ಸೂಕ್ತದ ಈ ಕೆಳಗಿನ ಶ್ಲೋಕದ ಬಗ್ಗೆ ಜಿಜ್ಞಾಸೆ ನಡೆದಿತ್ತು."ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||ಇಲ್ಲೇ ಕಸಿವಿಸಿ ಆಗುವುದು. ಯಾಕೆಂದರೆ ಇದು ಉತ್ತರ. ಇದರ ಪ್ರಶ್ನೆ ಬೇಕಾದರೆ ಈ ಶ್ಲೋಕದ ಹಿಂದಿನ ಶ್ಲೋಕ ಗಮನಿಸಬೇಕು. ಯಾಕೆಂದರೆ ಈಗ ನೋಡಿದ್ದು ಅಪೂರ್ಣ ಮತ್ತು ಈಗಾಗಲೇ ಹೇಳಿದಂತೆ ಅದು ಉತ್ತರ ಮಾತ್ರ. ಹಾಗಾದರೆ ಪ್ರಶ್ನೆ ಯಾವುದು? ಹಿಂದಿನ ಶ್ಲೋಕ ಗಮನಿಸೋಣ. ಮುಖಂ ಕಿಮ'ಸ್ಯ ಕೌ ಬಾಹೂ | ಕಾವೂರೂ ಪಾದಾ'ವುಚ್ಯೇತೇ ||ಅದರ ಅರ್ಥ..ಮುಖಂ ಕಿಮ'ಸ್ಯ ಅಂದರೆ ಇಲ್ಲಿ ಮುಖ್ಯ ಹುದ್ದೆ ಯಾರೂ ನಿಭಾಯಿಸ ಬೇಕು ಅಂತ. ಅದರ ಉತ್ತರ.. *ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್*ಅಂದರೆ ಬ್ರಾಹ್ಮಣ ಇದರ ಮುಖ್ಯ ಹೊಣೆ ಹೊರಬೇಕು. ಆದರೆ ಜಾತಿಯಲ್ಲಿ ಬ್ರಾಹ್ಮಣ ಆಗಬೇಕಿಲ್ಲ. ಪಂಡಿತ, ಜ್ಞಾನಿ ಬುದ್ಧಿವಂತ ಆಗಿರಬೇಕು ಎಂದು ಅರ್ಥ. ಹಾಗೆಯೇ *ಕೌ ಬಾಹೂ*..ಬಾಹು ಅಂದರೆ ಶಕ್ತಿವಂತ ಇನ್ನೊಂದರ್ಥ ಕ್ಷತ್ರಿಯ ಅಂತ. ಹಾಗಾದರೆ ವ್ಯವಸ್ಥಾಪಕನಾಗಿ ಕ್ಷತ್ರಿಯ, ಸಾಮರ್ಥ್ಯ ಉಳ್ಳವನು, ಸೇನಾಧಿಪತಿಯ ತರಹ ಇರ ಬೇಕಾದವನು ಎಂದು ಅರ್ಥ.ಮುಂದೆ..*ಊರೂ ತದ'ಸ್ಯ ಯದ್ವೈಶ್ಯಃ*ವೈಶ್ಯ ಅಂದರೆ, ವ್ಯವಹಾರ ತಜ್ಞ. ಅಂದರೆ ವ್ಯವಹಾರ ನೋಡಿ ಕೊಳ್ಳಲು ವೈಶ್ಯ ಬೇಕು ಎಂದರ್ಥ.*'ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||*ಶೂದ್ರೋ ಅ'ಜಾಯತಃ..ಇಲ್ಲಿ ಶೂದ್ರ ಅಂದರೆ ಈಗಿನ ಕಾಲದ ವಿಂಗಡಣೆಯಂತೆಎಸ್ಸಿ ಎಸ್ಟಿಅಲ್ಲ. ಬದಲಿಗೆ ಕೆಳ ಸ್ತರದಲ್ಲಿ ಕೆಲಸ ಮಾಡುವವರು ಅನ್ನುವ ಅರ್ಥ. ಹಾಗಾಗಿ ಕೆಳಸ್ತರದ ಕೆಲಸಕ್ಕೆ (ಕಾರ್ಮಿಕರು), ಯಾರು ಸೂಕ್ತ ಅಂತ ಅನ್ನುವುದನ್ನು ಹೇಳುತ್ತೆ.ಹೀಗೆ ಪ್ರತಿಯೊಂದು ವಿಷಯವೂ ಕೂಲಂಕಷವಾಗಿ ಪುರುಷ ಸೂಕ್ತದಲ್ಲಿ ನಮೂದಾಗಿದೆ. *ಉಸ್ಸಪ್ಪಾ* ಅನ್ನಿಸಿತೆ..?ಪ್ರಾಯೋಗಿಕವಾಗಿಬೆಂಗಳೂರಿನ ಸ್ಯಾಟಲೈಟ್ ಟೌನ್ ನ 50 ಎಕರೆ ಜಾಗದಲ್ಲಿ ಪರೀಕ್ಷಾ ಪ್ಲಾಂಟ್ವಿರಾಜಮಾನವಾಗಿದೆ. ಇಲ್ಲಿ 4000 MW ವಿಧ್ಯುತ್ ಶಕ್ತಿ ತಯಾರಿಸುವ ಉದ್ದೇಶ ಹೊಂದಿದೆ. ಇದೇ ರೀತಿ ಗುಜರಾತ್ ನಲ್ಲಿ ಪ್ರಾರಂಭವಾದ ಪ್ಲಾಂಟ್ ನ ಹೆಸರು Agragami Bharatiya Power Pvt.Ltd., (ABPPL). No ಇದನ್ನು ಪೋಲೆಂಡ್, ಜರ್ಮನಿ, ಕೆನಡಾ ಮತ್ತು ಯುಕೆ, ಹೀಗೆ ನಾಲ್ಕು ದೇಶದಲ್ಲಿ ಒಂದೇ ಬಾರಿಗೆ ಆರಂಭಿಸುತ್ತಿದ್ದಾರೆ.ಶಾಕ್ ಆಯ್ತೇ..? *ಆಗಬೇಕು ಅಂತಲೇ ಬರೆದಿದ್ದು.*

Word punner