This is the REALITY..

 ಪೆಟ್ರೊಲ್ ದರವನ್ನ ಹೇಳಿ ಜನರನ್ನ ಮಂಗ ಮಾಡೋದು ಹೇಗೆ...????

ನಮ್ಮ ನೆರೆ ಹೊರೆಯ ರಾಷ್ಟ್ರಗಳಲ್ಲಿ ಪೆಟ್ರೋಲ್ ತುಂಬಾ ಚೀಪು, ಎಷ್ಟು ಚೀಪು ಅಂದ್ರೆ ಅಲ್ಲಿಯವರು ಸ್ನಾನಕ್ಕೆ ಅಡಿಗೆಗೆ ಪೆಟ್ರೋಲೇ ಬಳಸೋದು ಅನ್ನೊ ಲೆವೆಲ್ಲಿಗೆ ನವರಂಗಿ ನಾಟಕ ಆಡೊ ಈ ಗುಲಾಮರು ನಮ್ಮನ್ನ ಯಾಮಾರಿಸ್ತಾ ಇರೋದು ಎಲ್ಲಿ...!!

ಆಯಾ ದೇಶದ ಪೆಟ್ರೋಲ್ ದರವನ್ನ ಅಲ್ಲಿನ ಕರನ್ಸಿಯಿಂದಲೇ ಅಳೆಯಬೇಕು ಹೊರತಾಗಿ ನಮ್ಮ ದೇಶದ ರೂಪಾಯಿಯಿಂದಲ್ಲ. ಅವರೇನು ಭಾರತದ ಕರೆನ್ಸಿ ಕೊಟ್ಟು ಪೆಟ್ರೋಲು ಖರಿದಿಸಿರ್ತಾರಾ....ಈಗ ವಿಷಯಕ್ಕೆ ಬರೋಣ....
#ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 262 ಶ್ರೀಲಂಕನ್ ರೂಪಾಯಿಗಳು....
#ನೇಪಾಳದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 157 ನೇಪಾಳಿ ರೂಪಾಯಿಗಳು...
#ಬಾಂಗ್ಲಾದೇಶದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 94 ಬಾಂಗ್ಲಾ ಟಾಕಾಗಳು(ಬಾಂಗ್ಲಾ ಕರೆನ್ಸಿಯ ಹೆಸರು)...
#ಪಾಕಿಸ್ತಾನದಲ್ಲಿ 120 ಪಾಕಿಸ್ತಾನಿ ರೂಪಾಯಿಗಳು.....
ಅಲ್ಲಿನ ಜನಕ್ಕೆ ಈ ಬೆಲೆ ಬಹಳ ದುಬಾರಿಯೇ. ಆದರೆ ಗುಲಾಮರು ಜನರನ್ನ ಯಾಮಾರಿಸ್ತಾ ಇರೋದು ಅಲ್ಲಿನ ದರವನ್ನ ಭಾರತದ ಕರೆನ್ಸಿಗೆ ಬದಲಾಯಿಸಿ ದಾರಿ ತಪ್ಪಿಸುವುದರಿಂದ.
ಅದೇ ಈ ಗುಲಾಮರು ಯಾವತ್ತಾದರೂ ಜಗತ್ತಿನಲ್ಲೇ ಅಭಿವೃದ್ಧಿ ಹೊಂದಿದ ದೇಶಗಳು ಎಂದು ಕರೆಸಿ ಕೊಳ್ಳುವ ದೇಶಗಳ ಪೆಟ್ರೋಲ್ ಬೆಲೆಯನ್ನ ಭಾರತದ ಕರೆನ್ಸಿಗೆ ಬದಲಾಯಿಸಿ ಹೇಳಿದ್ದಾರಾ??? ಅವರು ಹೇಳದೇ ಇದ್ದರೆ ನಾನು ಹೇಳ್ತೆನೆ ಕೇಳಿ....
#ಯುನೈಟೆಡ್ ಸ್ಟೇಟ್ಸನಲ್ಲಿ ಒಂದು ಲೀಟರ್ ಪೆಟ್ರೊಲಿನ ಬೆಲೆ 102 ರೂಪಾಯಿಗಳು (1.36 ಡಾಲರ್ಸ)
#ಕೆನಡಾದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 102 ರೂಪಾಯಿಗಳು (1.71 ಕೆನಡಿಯನ್ ಡಾಲರ್ಸ್)
#ಸೌದಿ ಅರೆಬಿಯಾ ಅಂದ್ರೆ ಪೆಟ್ರೋಲು, ಪೆಟ್ರೋಲು ಅಂದ್ರೆ ಸೌದಿ ಅರೆಬಿಯಾ ಅನ್ನುವಂತಹ ದೇಶದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 102 ರೂಪಾಯಿಗಳು (5.10 ಸೌದಿ ರಿಯಾಲ್ ಗಳು)
#ಇಂಗ್ಲೆಂಡಿನಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 102 ರೂಪಾಯಿಗಳು (1 ಪೌಂಡ್)
#ಗುಲಾಮರ ಸ್ವರ್ಗ ಚೀನಾದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ 98 ರೂಪಾಯಿಗಳು (8.1 ರೆನ್'ಮನ್'ಬಿ ಗಳು)
ಇವರು ದಿಕ್ಕು ತಪ್ಪಿಸುತ್ತಾರೆ ನಾವು ದಿಕ್ಕು ತಪ್ಪುತ್ತೆವೆ. ಅತೀ ಬುದ್ಧಿವಂತರು ಎನ್ನಿಸಿಕೊಳ್ಳೊ ಭರದಲ್ಲಿ ಗುಲಾಮರಿಗಿಂತ ದೊಡ್ಡ ಮುಠ್ಠಾಳರಾಗಿ ಬಿಡುತ್ತೆವೆ. ಅವರ್ಯಾಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನ ಕಂಪೆರ್ ಮಾಡುವುದಿಲ್ಲ. ಅಭಿವೃದ್ಧಿ ಹೊಂದಿದ್ದು ಗೆಣಸು ಕೀಳೋಕಾ!!
ಅಲ್ಲಾ ರಿ ... ನಾವು ಎರಡು ತಿಂಗಳು ದುಡಿಯೋದು ನಿಲ್ಸಿದ್ರೆನೇ ಮನೆಯಲ್ಲಿ ಬಡತನ ಅನ್ನೊದು ವಕ್ಕರಿಸುತ್ತೆ. ಅಂತಹದ್ದರಲ್ಲಿ ದೇಶವೇ ಸ್ತಬ್ದವಾಗಿದ್ದಾಗ ಅದಕ್ಕೆ ಚೆತರಿಸಿಕೊಳ್ಳುವ ಅವಕಾಶವನ್ನೂ ಕೊಡದೆ ನಮ್ಮ ದೇಶವನ್ನ ನಾವೇ ತುಳಿದು ತುಳಿದು ಹಾಕ್ತಾ ಇದ್ದೇವೆ. ಅವರಿಗೆ ಅಧಿಕಾರ ಬೇಕು ಬಾಯಿಗೆ ಬಂದದ್ದನ್ನ ಒದರುತ್ತಾರೆ, ನಮಗೆ ಬುದ್ಧಿ ಇಲ್ಲಾವ?? ಇವೆಲ್ಲವನ್ನ ನೀವು ಇಂಟರ್ನೆಟ್ ನಲ್ಲಿ ತೆಗೆದು ನೋಡಬಹುದು. ಆದರೆ ನಾವು ಗುಲಾಮರು ಹರಿ ಬಿಡುವ ಫೊಟೋಶಾಪ್ ಗಳನ್ನೇ ನಂಬಿ ಮೋದಿಯನ್ನ ಅಪಹಾಸ್ಯ ಮಾಡುತ್ತೇವೆ, ತುಚ್ಚವಾಗಿ ಮಾತನಾಡುತ್ತೆವೆ...
ಇದರಿಂದ ಮೋದಿಯ ಯೋಗ್ಯತೆಯೇನೂ ಕಡಿಮೆ ಆಗಲ್ಲ... ಕಡಿಮೆ ಆಗುವುದು ನಮ್ಮ ಯೋಗ್ಯತೆ ಅಷ್ಟೆ.....😊😊
ಸರಿ ಅನಿಸಿದರೆ ಖಂಡೀತ ಶೇರ್ ಮಾಡಿ....ಜಾಗೃತಿ ಮೂಡಿಸಿ
via: Nayak Ganapahi

Comments

Popular Posts