This is Life

*
೨೦೨೧ ರ ಹೊಸ ವರ್ಷದಲ್ಲಿ ಗಂಡನ ಕರ್ತವ್ಯಗಳು*  ...
.....................................
Responsibilities for Husband in 2021.

1.ಗ್ಯಾಸ್  ಮೇಲಿಟ್ಟ ಕುಕ್ಕರ್ ಮೂರು  ಸಿಟಿ ಹೊಡೆದ ನಂತರ ಗ್ಯಾಸ್ ಒಲೆ ಬಂದು ಮಾಡುವುದು
To switch off gas stove when cooker whistles three times.

2. ಉಕ್ಕಿ ಬರುತ್ತಿರುವ ಹಾಲನ್ನು ನೋಡಿದ ತಕ್ಷಣ ಓಡಿ ಹೋಗಿ ಒಲೆ ಆರಿಸುವುದು.
When the milk boils completely switch of the stove immediately.
         
3.ಡೋರ್ ಬೆಲ್ ಅಟೆಂಡ್ ಮಾಡುವುದು.  
Attend the door bell.

4.ಮೇಲಿನ ಅಟ್ಟದಲ್ಲಿರುವ ಡಬ್ಬಿಗಳನ್ನು ಇಳಿಸಿ ಕೊಡುವುದು.  
To remove tins from the top of cabinets as and when required.

5. ಗಟ್ಟಿಯಾಗಿ ಮುಚ್ಚಿರುವ ಡಬ್ಬಿಗಳ ಮುಚ್ಚಳ ತೆಗೆದು ಕೊಡುವುದು.
Open the caps and lids of tins if they are tight. 

6. ಸಾಸ್ ಮತ್ತು ಜಾಮ್ ಬಾಟ್ಲಿ ಮುಚ್ಚಳಗಳನ್ನು ಓಪನರನಿಂದ ತೆಗೆದು ಕೊಡುವುದು. 
To remove the lids of sauce and jam bottles by opener.

7. ಮನೆಯಲ್ಲಿನ ಹಲ್ಲಿ, ಜಿರಲಿ ಇತ್ಯಾದಿ ಭಯಂಕರ ಪ್ರಾಣಿಗಳನ್ನು ಹೊಡೆದು ಹೊರಗೆ ಹಾಕುವುದು.
To kill cockroaches, lizards and similar creatures and through it out.

8.ಹೊಸ ಗ್ಯಾಸ್ ಸಿಲಿಂಡರ್ ಬದಲಾಯಿಸಿ ಕೊಡುವುದು.
To change the gas cylinder as and when required.

9. ಹೇಳಿದಾಗ ಮಾತ್ರ ಮಕ್ಕಳ ಮೇಲೆ ಗದರುವದು, ಅವರನ್ನು ಸಂಭಾಳಿಸುವುದು.
Bang the children only when instructed and manage them.

10. ಪೇಪರ್ ಬಂದ ತಕ್ಷಣ ಓದುವದು ಮತ್ತು ಪದಬಂಧ್ ಬಿಡಿಸುವದು ಮಾಡಬಾರದು.
Read the newspaper as soon as it comes but not focus on crossword puzzles 🧩 
   
11. *ಮನೆಯಿಂದ ಹೊರಗೆ ಬಿದ್ದರೆ ಮುಗಿತು ಖಬರೇ ಇರುವುದಿಲ್ಲ*  ಎಂಬ ಮಾತು ಕೇಳಿಸಿಕೊಂಡರೂ, ಕೊಟ್ಟ ಪಟ್ಟಿ ಪ್ರಕಾರ ಮನೆ ಸಾಮಾನು ತಂದು ಹಾಕುವುದು. 
Even If you are blamed for roaming around to ensure bring provisions as per the list given.

12. ಬಟ್ಟೆಗಳನ್ನು ಇಸ್ತ್ರಿ ಮಾಡುವದು ಇಲ್ಲಾ ಮಾಡಿಸಿ ತಂದು ಕೊಡುವುದು. 
To press washed clothes or get it pressed in time.

13.ಬ್ಯಾಂಕ್ ವ್ಯವಹಾರ ಮತ್ತು ಇತರ ಬಿಲ್ ತುಂಬುವ ಕೆಲಸ ಮಾಡುವುದು.
To take care of Banking and paying essential bills in time.

14.ತಿಂಗಳ ಸಾಮಾನು ತರುವಾಗ ಅಂಗಡಿಯಲ್ಲಿ ಚೀಲ ತಾವೇ ಎತ್ತಿ ಕೊಳ್ಳುವುದು.  
To carry the bags when monthly purchase of household products.

15. ಶಾಪಿಂಗ್ ಮಾಡುವಾಗ ಮಾಲ್ಗಳಲ್ಲಿ ಎಷ್ಟೇ ಟೈಮ್ ಆದರೂ ಕಿರಿ ಕಿರಿ ಮಾಡದೆ ಹಿಂದೆ ಹಿಂದೆ ಬರುವುದು ಮತ್ತೆ ಖರೀದಿ ಮಾಡಿದಾಗ  ಪೇಮೆಂಟ್ ಸುಮ್ಮನೆ ಮಾಡುವುದು.
While shopping in malls simply follow and simply make payments of purchases 

16. ಅತ್ತೆ ಮನೆಯ ನೆಂಟ್ರು ಬಂದಾಗ ಮನೆಯ ಹೆಚ್ಚಿನ  ಕೆಲಸಗಳನ್ನು ನೋಡಿ,  ಮಾಡಿ *ಗುಡ್ ಬಾಯ್* ಆಗುವುದು.  
When in law’s come home take care of additional work and get credit as “good boy”

17.ಮನೆಯ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ಮತ್ತು ಪ್ಲಮ್ಬಿಂಗ್ ಕೆಲಸ ಮಾಡುವುದು. 
To take care of petty repairs of electrical and plumbing work.

18. ನೆಲದ ಮೇಲೆ ಇಲ್ಲಾ ಮಂಚದ ಕೆಳಗೆ ಬಿದ್ದು ಮೂರು ತುಂಡಾಗಿರುವ ರಿಮೋಟ್ ರಿಪೇರಿ ಮಾಡಿ ಜೀವಂತಗೊಳಿಸುವುದು. 
To repair TV remote which has broken into three pieces and activate.

19. ಮನೆಯಲ್ಲಿ ಕಾರು ಸ್ಕೂಟರ್ ಇದ್ದಲ್ಲಿ, ಗಾಡಿ ಡ್ರೈವರ್ ಕಾರ್ಯ ನಿರ್ವಹಿಸುವುದು.  
To undertak driver’s work if two or four wheelers are available at home.

20. ಮನೆಯಲ್ಲಿ ವಾಹನ ಇಲ್ಲದಿದ್ರೆ ಆನ್ಲೈನ್ ಬುಕ್ ಮಾಡಿ ಕೊಡುವುದು.    
If not arrange cabs online.

........‌ಕೊನೆಯದಾಗಿ *ಈ ಮನೆಯಲ್ಲಿ ಏನೇ ಕೆಲಸಾ ಇದ್ರು ನಾನೇ ಮಾಡಬೇಕು, ಒಬ್ಬರದಾದರೂ ಸಹಾಯಕ್ಕೆ ಸಿಗೋದಿಲ್ಲ* ಎನ್ನುವ ಅರ್ಧಾಂಗಿಯವರ ವಾಕ್ಯವನ್ನು ಎಷ್ಟು ಸಲವಾದರೂ ಶಾಂತ ರೀತಿಯಿಂದ ಕೇಳಿಸಿಕೊಳ್ಳಬೇಕು. 
ಕೋಲೇ ಬಸವನಂತೆ  ತಲೆ ಅಲುಗಾಡಿಸಬೇಕು.
With all these responsibilities fulfilled if better half still say’s that she doesn’t get any help husband should just hear and keep quiet.
😁!ಹೊಸ ವರುಷದ ಹರುಷಕ್ಕೆ ಇಪ್ಪತ್ತು ಸೂತ್ರಗಳು!!!*
Follow these 20 commandments for a happier life.

Comments

Popular Posts